ಕನ್ನಡ ಪರ ಹೋರಾಟದ ಮಾತಿರಲಿ, ಕೆಲವೂಮ್ಮೆ ಕನ್ನಡ, ಕನ್ನಡಿಗರ ಬಗೆಗಿನ ನ್ಯಾಯಪರ ಹಕ್ಕುಗಳ
ರಾಜಕೀಯ ಪ್ರಭಾವ ಹಾಗೂ ಸ೦ಖ್ಯೆಯ ಕಾರಣದಿಂದಾಗಿಯೂ ಕಾಲದಿಂದಲೂ ಕನ್ನಡ ಭಾಷೆ ಮಾತ್ರವಲ್ಲದೆ ಕರ್ನಾಟಕ ನಿರ್ಲಕ್ಷ್ಯ ಧೋರಣೆಗೆ ಬಲಿಯಗುತ್ತಾ ಬಂದಿದೆ. ಎಲ್ಲಾ ಸಾಮರ್ಥ್ಯವಿದ್ದೂ ಇಲ್ಲಿನ ರಾಜಕಾರಣಿಗಳು, ಸಾಹಿತಿಗಳು, ಕಲಾವಿದರು, ಪ್ರತಿಭಾವ೦ತರು ಕಡೆಗೆ ಸಾಮನ್ಯ ಜನರೂ ಮಲತಾಯಿ ಧೋರಣೆಯನ್ನು ಅನುಭವಿಸುತ್ತಾ ಬಂದಿರುವುದನ್ನು ಇತಿಹಾಸದಲ್ಲಿ ಕಾಣಬಹುದಾಗಿದೆ. ಬಲಿಷ್ಠರನ್ನೇ ಪೋಷಿಸಿ, ಬೆಳೆಸಿ ಬೆ೦ಬಲಿಸುವ ವ್ಯವಸ್ಥೆ ಸಹ ಕನ್ನಡದ ನೋವಿಗೆ ಕುರುಡಾದಾಗ, ಬೆನ್ನು ಮಾಡಿ ನಿ೦ತಾಗ, ಹೋರಾಟವಲ್ಲದ ಅನ್ಯಮಾರ್ಗವೇ ಕಾಣಸಿಗದಾಗ ಹೋರಾಟವೇ ರಾಜ ಮಾರ್ಗವಾಯಿತು.
